ರಸ್ತೆ ದುರಸ್ಥಿ ಮಾಡಿಸುವಂತೆ ವಾಹನ ಸವಾರರ ಅಗ್ರಹ

Oct 25, 2025 - 12:46
 0  30
ರಸ್ತೆ ದುರಸ್ಥಿ ಮಾಡಿಸುವಂತೆ ವಾಹನ ಸವಾರರ ಅಗ್ರಹ

  ಸಂತೆಮರಹಳ್ಳಿ: ಕಮರವಾಡಿ  ಗೇಟ್ ಇಂದ ಸಂತೆಮರಹಳ್ಳಿಗೆ ಹಾದು ಹೋಗುವ ರಸ್ತೆ ಬಗ್ಗೆ ಹೇಳೋರೋ ಕೇಳೋರಿಲ್ಲ ಏಕೆಂದರೆ ರಸ್ತೆ ಮುಕಾಂತರ ಹಾದು ಹೋಗುವ ವಾಹನ  ಸವಾರರ ಗೋಳು ಅಷ್ಟಿಷ್ಟಲ್ಲ ಸುಮಾರು ನಾಲ್ಕು ಕಿಲೋಮೀಟರ್ ರಸ್ತೆ ತುಂಬಾ ಹದಗೆಟ್ಟಿದ್ದು ಅಲ್ಲಲ್ಲಿ ಗುಂಡಿಗಳು ಬಿದ್ದು  ವಾಹನ ಚಲಾವಣೆ ಮಾಡಲು ಹರಾಸಾಹಸ ಪಡಬೇಕಾಗಿದೆ.

ಈ ರಸ್ತೆ ವಾಹನ ಸವಾರರಿಗೆ ತಮ್ಮ ಜೀವ  ಕೈಯಲ್ಲಿ ಹಿಡಿದುಕೊಂಡು ವಾಹನ ಚಲಾಯಿಸಬೇಕಾಗಿದೆ ಸಮರ್ಪಕವಾದ ರಸ್ತೆ ಇಲ್ಲದ ಕಾರಣ  ವಾಹನ ಸವಾರರು  ಈ ಭಾಗದ ಈ ಚುನಾಯಿತ ಪ್ರತಿನಿಧಿಗಳ ಮೇಲೆ ಇಡೀ ಶಾಪ ಹಾಕುತ್ತಿದ್ದಾರೆ.

ಈ ರಸ್ತೆ ಮುಕಾಂತರ ಸಾವಿರಾರು ವಾಹನಗಳು ಪ್ರತಿನಿತ್ಯ ಹೊರ ಜಿಲ್ಲೆ ಸೇರಿದಂತೆ ಹೊರ ರಾಜ್ಯಗಳಿಗೂ ಪ್ರಯಾಣ ಮಾಡುತ್ತಿದ್ದಾರೆ ಆದರೆ ಅವರ ಪಾಡು ಅಷ್ಟಿಷ್ಟಲ್ಲ ಎಂದರೆ ತಪ್ಪಾಗಲಾರದು.

ಈ ಭಾಗದಲ್ಲಿ ಪ್ರಮುಖ ರಾಜಕಾರಣಿಗಳು ಪ್ರಯಾಣ ಮಾಡಿದರು ಕಣ್ಣಿಗೆ ಕಂಡರೂ ಕಾಣದಂತೆ ಹೋಗುವುದು ವಿಪರ್ಯಾಸ ಅಲ್ಲವೇ.


ಈ ರಸ್ತೆ ಮೇಲೆ ಪ್ರಯಾಣ ಮಾಡುವ ವಯೋವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳ ಸ್ಥಿತಿ  ಅಯೋಮಯ ಎಂದರೆ ತಪ್ಪಾಗಲಾರದು ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಈ ರಸ್ತೆ ಬಗ್ಗೆ ಗಮನ ಹರಿಸಿ ಸೂಕ್ತ ರೀತಿಯಲ್ಲಿ ರಸ್ತೆದುರಸ್ಥಿ ಮಾಡಿಸಿಕೊಡಬೇಕೆಂದು ಈ ಭಾಗದ ವಾಹನ ಸವಾರರು ಹಾಗೂ ಈ ಭಾಗದ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

What's Your Reaction?

Like Like 3
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456