ರೂಡಗಿ ಗ್ರಾಮದಲ್ಲಿ ಅದ್ದೂರಿಯಾಗಿ ನೇರವೇರಿದ ರಥೋತ್ಸವದ

Mar 17, 2026 - 13:17
 0  8
ರೂಡಗಿ ಗ್ರಾಮದಲ್ಲಿ ಅದ್ದೂರಿಯಾಗಿ ನೇರವೇರಿದ ರಥೋತ್ಸವದ

    ಮುದ್ದೇಬಿಹಾಳ: ತಾಲೂಕಿನ ರೂಡಗಿ ಗ್ರಾಮದ ಶ್ರೀ ಯಲ್ಲಾಲಿಂಗ ಮಹಾರಾಜರ ಜಾತ್ರಾ ಮಹೋತ್ಸವವು ಮಾರ್ಚ್  15ರಂದು ಸಾಯಂಕಾಲ ಶ್ರೀ ಯಲ್ಲಾಲಿಂಗೇಶ್ವರ ಮಹಾ ರಥೋತ್ಸವ  ಅದ್ದೂರಿಯಾಗಿ ನಡೆಯಿತು. ರಥೋತ್ಸವಕ್ಕೆ ಮಠದ ಶ್ರೀಗಳಾದ ಯಲ್ಲಾಂಗೇಶ್ವರ ಮಹಾರಾಜರ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ರಥೋತ್ಸವ ಜರುಗಿತು.ಭಕ್ತರು ರಥೋತ್ಸವಕ್ಕೆ ಉತ್ತತ್ತಿ, ಚೂರುಮುರಿ(ಮಂಡಾಳ) ಎಸೆದು ಭಕ್ತಿಯನ್ನು ಸಮರ್ಪಿಸಿದರು.

 ಅದಕ್ಕೂ ಮುಂಚೆ ಮುಂಜಾನೆ 10 ಗಂಟೆಗೆ ಸ್ಥಳೀಯ ಶ್ರೀ ಅಕ್ಕಮಹಾದೇವಿ ಮಹಿಳಾ ಸಂಘದಿಂದ ಪಂಚ ಪಲ್ಲಕ್ಕಿಗಳಿಗೆ ರುದ್ರಾಭಿಷೆಕ ಮತ್ತು ಮಹಾಪೂಜೆ ನಡೆಯಿತು. ನಂತರ ತಾಳಿಕೋಟಿಯ ಶ್ರೀ ಸಿದ್ದಲಿಂಗದೇವರ ಸಮ್ಮುಖದಲ್ಲಿ ಶ್ರೀ ಯಲ್ಲಾಲಿಂಗ ಮಹಾರಾಜರು ಮತ್ತು ಹಳ್ಳೂರ ಗ್ರಾಮದ ತಿಪ್ಪಣ್ಣ ಪೂಜಾರಿ ಅವರು ಅಗ್ನಿಪ್ರವೇಶ ಮಾಡಿದರು. ಸಾಯಂಕಾಲ 4 ಗಂಟೆಗೆ ಆಲಕೊಪ್ಪರ ಗ್ರಾಮದಿಂದ ರಥೋತ್ಸವದ ಮಿಣಿ, ಗುಂಡಕರಜಗಿ ಗ್ರಾಮದಿಂದ ಕಳಶ ಮತ್ತು ಛತ್ರಿ, ಹಾಗೂ ರೂಡಗಿ ತಾಂಡಾದಿಂದ ರಥೋತ್ಸವಕ್ಕೆ ಅಲಂಕಾರದ ಹೂವಿನ ಹಾರನ್ನು ಸಕಲ ವಾದ್ಯ ವೈಭವಗಳೋಂದಿಗೆ ಶ್ರೀಮಠಕ್ಕೆ ಬರಮಾಡಿಕೊಂಡರು. ನಂತರ  ಮಹಾರಥೋತ್ಸವ ನಡೆಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456