"ಸಡಗರ ಸಂಭ್ರಮದಿಂದ ಹೊಳಲು ಗ್ರಾಮದ ಗಂಗಾಮತಸ್ಥರ ಕುಲದೇವತೆಯಾದ ಕಾಳಮ್ಮ ದೇವಿ ಹಬ್ಬ"

Mar 13, 2026 - 18:24
 0  5
"ಸಡಗರ ಸಂಭ್ರಮದಿಂದ ಹೊಳಲು ಗ್ರಾಮದ ಗಂಗಾಮತಸ್ಥರ ಕುಲದೇವತೆಯಾದ ಕಾಳಮ್ಮ ದೇವಿ ಹಬ್ಬ"
ಚಿತ್ರವರದಿ: ಕೆ.ಪಿ.ಕುಮಾರ್ ಹೊಳಲು.

ಮಂಡ್ಯ ತಾಲೂಕು ಹೊಳಲು ಗ್ರಾಮದಲ್ಲಿ ಗಂಗಾಮತಸ್ಥರ ಕುಲದೇವತೆಯಾದ 
ಶ್ರೀ ಕಾಳಿಕಾಂಬ ದೇವಿಯ 
(ಕಾಳಮ್ಮ ದೇವಿ) ಹಬ್ಬವನ್ನು ಸಡಗರ ಸಂಭ್ರಮ ವಿಜೃಂಭಣೆಯಿಂದ ಆಚರಿಸಲಾಯಿತು. 
ಗುರುವಾರ ರಾತ್ರಿ ದೇವಿಗೆ ತಂಬಿಟ್ಟಿನ ಆರತಿಯೊಂದಿಗೆ  ತಮಟೆ ನಗಾರಿಯೊಂದಿಗೆ ಗ್ರಾಮದ ಹೊರ ವಲಯದಲ್ಲಿರುವ 
ಶ್ರೀ ಕಾಳಮ್ಮ ದೇವಿಯ ದೇವಸ್ಥಾನಕ್ಕೆ ಮಕ್ಕಳು ಮಹಿಳೆಯರು ತೆರಳಿ ಪೂಜೆ ಸಲ್ಲಿಸಲಾಯಿತು.


ಈ ದಿನ ಶುಕ್ರವಾರ ಮಧ್ಯಾಹ ಗ್ರಾಮದ ಶ್ರೀರಾಮ ಮಂದಿರದಿಂದ ಮಕ್ಕಳು ಮಹಿಳೆಯರು  ಬಾಯಿ ಬೀಗದೊಂದಿಗೆ ತಮಟೆ ನಗಾರಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮುಖಂಡರು ಎಲ್ಲರೂ ಸೇರಿ  ಮೆರವಣಿಗೆ ಮುಖಾಂತರ 
 ಶ್ರೀ ದೊಡ್ಡಮ್ಮತಾಯಿ ದೇವಸ್ಥಾನ,  
ಶ್ರೀ ಬಲಮುರಿ ಗಣಪತಿ ದೇವಸ್ಥಾನ ಪೂಜೆ ಸಲ್ಲಿಸಿ,  ಶ್ರೀ ಕಾಳಮ್ಮ ದೇವಿಯ ದೇವಸ್ಥಾನಕ್ಕೆ  ಎಲ್ಲರೂ  ಹೆಡಿಗೆಯೊಂದಿಗೆ ಮೆರವಣಿಗೆ ಮುಖಾಂತರ ತೆರಳಿ ಗ್ರಾಮದ ಪ್ರತಿಯೊಂದು ಕುಟುಂಬದವರು ದೇವಿಗೆ ಪೂಜೆ ಸಲ್ಲಿಸಿ ಮನೆಯಿಂದ  ತಂದಂತಹ ಪೂಜೆ ಸಾಮಗ್ರಿಗಳೊಂದಿಗೆ ಅಲ್ಲೇ ಅಡಿಗೆ ಮಾಡಿ ಅಮ್ಮನಿಗೆ  ಅರ್ಪಿಸಲಾಯಿತು.
ಹಬ್ಬದ ಪ್ರಯುಕ್ತ ಅಮ್ಮನಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಮಾಡಲಾಯಿತು.
ಗ್ರಾಮದ ಗಂಗಾಮತಸ್ಥರ ಮುಖಂಡರಾದ ನಾರಾಯಣಪ್ಪನವರು ಮಾತನಾಡುತ್ತಾ ನಮ್ಮ ಹಿರಿಯರಾದ ರವಳಯ್ಯ, ಬೋರಯ್ಯ , ರಾಮಸಿದ್ದಯ್ಯ, ಕರಿಯಪ್ಪನವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಹಿಂದಿನಿಂದಲೂ ಈ ಹಬ್ಬವನ್ನ  ಬಹಳ ವಿಜೃಂಭಣೆಯಿಂದ ಮೂರು ವರ್ಷಕ್ಕೊಮ್ಮೆಆಚರಿಸುತ್ತಿದ್ದೇವೆ, ಹೊಳಲು ಗ್ರಾಮಕ್ಕೆ ಹಾಗೂ ಎಲ್ಲರಿಗೂ ತಾಯಿ ಒಳ್ಳೆಯದನ್ನು ಮಾಡಲಿ.
 ಈ ಹಬ್ಬದಿಂದ ಗ್ರಾಮಕ್ಕೆ ರೈತರಿಗೆ ಸಮೃದ್ಧಿಯಾಗಲೆಂದು ಹೇಳಿದರು. 
ಈ ಸಂದರ್ಭದಲ್ಲಿ ಮಹಿಳೆಯರು ಮಕ್ಕಳು ಮುಖಂಡರು ಗಂಗಾಮತಸ್ಥರ ಕುಲಬಾಂಧವರು ದೇವರ ದರ್ಶನ ಪಡೆದು ಪುನೀತರಾದರು. 

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456