ಸಾರ್ವಜನಿಕರಿಗೆ ವಿದ್ಯುತ್ ಸುರಕ್ಷತಾ ಜಾಗೃತಿ ಅಗತ್ಯ-ಜಿಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್ ರಮೇಶ್ ಕುಮಾರ್
ಬಾಗೇಪಲ್ಲಿ: ವಿದ್ಯುತ್ ಅವಘಡದಿಂದ ಸಂಭವಿಸುವ ಪ್ರಾಣ ಹಾನಿ ತಪ್ಪಿಸಲು, ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಉಂಟಾಗುವ ಅನಾಹುತ,ಆಸ್ತಿ ನಷ್ಟ ತಪ್ಪಿಸಲು ಜನರು ಜಾಗೃತರಾಗುವುದು ಅತ್ಯಅಗತ್ಯ’ ಎಂದು ಬೆಸ್ಕಾಂ ಜಿಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್ ರಮೇಶ್ ಕುಮಾರ್ ತಿಳಿಸಿದ್ದಾರೆ.
ಪಟ್ಟಣದ ಬೆಸ್ಕಾಂ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು ಕೈಗಾರಿಕೆಯಲ್ಲಿ ಕೆಲಸ ಮಾಡುವವರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ವಿದ್ಯುತ್ ಸರಬರಾಜು ಕಂಪನಿ ಸಿಬ್ಬಂದಿ, ವಿದ್ಯುತ್ ಗುತ್ತಿಗೆದಾರರು, ರೈತರು ಹಾಗೂ ಜನರನ್ನು ಈ ಅಭಿಯಾನದ ಮೂಲಕ ತಲುಪಬೇಕು.
ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬoದಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ನಿಯಮಗಳು ಹಾಗೂ ಮಾಗ೯ಸೂಚಿಗಳನ್ನು ಕಟ್ಟನಿಟ್ಟಾಗಿ ಪಾಲಿಸುವ ಮೂಲಕ ವಿದ್ಯುತ್ ಸುರಕ್ಷತೆಯನ್ನು ಕಾಯ್ದುಕೊಳ್ಳಬಹುದಾಗಿದೆ, ಮಾತ್ರವಲ್ಲದೆ ಗುಣಮಟ್ಟದ, ಅಡಚಣೆ ರಹಿತ, ಸುರಕ್ಷಿತ ವಿದ್ಯುತ್ ಗ್ರಾಹಕರಿಗೆ ನೀಡಬಹುದಾಗಿದೆ ಎoದರು.
ಪವರ್ ಮ್ಯಾನ್ ಗಳ ಸುರಕ್ಷತೆಗೆ ಅನುಗುಣವಾಗಿ ವಿದ್ಯುತ್ ಮಾರ್ಗಗಳು, ವಿದ್ಯುತ್ ಪರಿವರ್ತಕಗಳು, ವಿದ್ಯುತ್ ಉಪಸ್ಥಾವರಗಳು, ಬಹುಮಹಡಿ ಕಟ್ಟಡಗಳು ಸೇರಿದಂತೆ ಎಲ್ಲ ವಿದ್ಯುತ್ ಸ್ಥಾವರಗಳಲ್ಲೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ನಮ್ಮ ಜೀವದ ಜೊತೆಗೆ ನಮ್ಮ ಕುಟುಂಬವು ನಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಕೆಲಸದ ವೇಳೆ ಜೀವ ರಕ್ಷಕ ವಸ್ತುಗಳನ್ನು ಬಳಸುವಂತೆ ಹೇಳಿದರು.
ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹದ ಪ್ರಯುಕ್ತ, ವಿದ್ಯುತ್ ಸುರಕ್ಷತೆಯ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಬಾಗೇಪಲ್ಲಿ ಬೆಸ್ಕಾಂ ಉಪವಿಭಾಗದ ಕಚೇರಿಯಿಂದ ವತಿಯಿಂದ ಗೂಳೂರು ವೃತ್ತದ ವರೆಗೂ ವರೆಗೆ ತೆರಳಿ ಗ್ರಾಹಕರಿಗೆ ವಿದ್ಯುತ್ ಸುರಕ್ಷತೆಯ ಬಗ್ಗೆ ಕರ ಪತ್ರ ಹಂಚಿ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಯಿತು.
ಸಹಾಯಕ ನಿರ್ವಾಹಕ ಇಂಜಿನಿಯರ್ ಪಿ.ಜಿ.ಸೋಮುಶೇಖರ್ ಮಾತನಾಡಿ ವಿದ್ಯುತ್ ಸುರಕ್ಷತೆಯ ಬಗ್ಗೆವ್ಯಾಪಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿವಷ೯ ವಿದ್ಯುತ್ ಸುರಕ್ಷತಾ ಸಪ್ತಾಹವನ್ನು ಆಯೋಜಿಸಿಕೊoಡು ಬರಲಾಗುತ್ತಿದೆ. ಶಾಲಾ,ಕಾಲೇಜುಗಳಲ್ಲಿ,ಅಂಗಡಿಗಳಲ್ಲಿ ಸೇರಿದ೦ತೆ ವಿವಿದೆಡೆ ಒಂದು ವಾರಗಳ ಕಾಲ ಕರಪತ್ರ ಹಾಗೂ ವಿಡಿಯೋ ತುಣುಕುಗಳ ಮೂಲಕ
ವಿದ್ಯುತ್ ಸುರಕ್ಷತಾ ಜಾಗೃತಿ ಮೂಡಿಸಲಾಗುವುದು ಎoದು ವಿವರಿಸಿದರು.
ಈ ಸಂಧರ್ಭದಲ್ಲಿ ತಾಂತ್ರಿಕ ಶಾಖಾ ಸಹಾಯಕ ಇಂಜಿನಿಯರ್ ರಮೇಶ್,ಕರ್ನಾಟಕ ವಿದ್ಯುತ್ ಪ್ರಸಾರ ನಿಗಮ ನೌಕರರ ಸಂಘದ ಕೇಂದ್ರ ವಲಯ ಕಾರ್ಯಸಮಿತಿ ಅಧಿಕ ಕಾರ್ಯದರ್ಶಿ ಸುಕುಮಾರ್,ಉಪಾಧ್ಯಕ್ಷ ಪಾಪಣ್ಣ,ಗುತ್ತಿಗೆದಾರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ,ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಸ್ಥೆ ಅಧ್ಯಕ್ಷ ಬಾಲು, ಕಾರ್ಯದರ್ಶಿ ಗಂಗಾಧರ್,ಸೇರಿದಂತೆ ಮತ್ತಿತರರು ಇದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
