ಸಿಹಿ-ಕಹಿ ಎರಡು ಸಮಾನವಾಗಿ ಸ್ವೀಕರಿಸಿ-ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ. ಎನ್.ಕೃಷ್ಣಾರೆಡ್ಡಿ

Mar 19, 2026 - 18:44
 0  17
ಸಿಹಿ-ಕಹಿ ಎರಡು ಸಮಾನವಾಗಿ ಸ್ವೀಕರಿಸಿ-ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ. ಎನ್.ಕೃಷ್ಣಾರೆಡ್ಡಿ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಭಾಗ್ಯನಗರ: ಬೇವು ಬೆಲ್ಲ ಸವಿಯುತ ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ ಹಾಗೂ ಹೊಸ ವರುಷ ಎಲ್ಲರ ಬಾಳಲ್ಲಿ ಹೊಸ ಭರವಸೆ ಮೂಡಲಿ ಹಾಗೂ ಸಿಹಿ ಮತ್ತು ಕಹಿಯನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬುವುದೇ ಚಂದ್ರಮಾನ ಯುಗಾದಿ ಹಬ್ಬದ ಮಹತ್ವ ಅಡಿಗೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ. ಎನ್.ಕೃಷ್ಣಾರೆಡ್ಡಿ ತಿಳಿಸಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆ ಬಳಿ ಇರುವ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಪತ್ರಕರ್ತರ ಸಂಘದಿಂದ ತಾಲ್ಲೂಕು ವಾರದಿಗಾರರಿಗೆ ಏರ್ಪಡಿಸಲಾಗಿದ್ದ ಬೇವು-ಬೆಲ್ಲ ವಿತರಣೆ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಸಿಹಿ ಹಂಚಿ ಶುಭಹಾರೈಸಿ ಮಾತನಾಡಿದ ಅವರು ಯುಗಾದಿಯು ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಶುದ್ಧ ಪಾಡ್ಯಮಿಯಂದು ಆಚರಿಸಲಾಗುವ ಹೊಸ ವರ್ಷದ ಆರಂಭವಾಗಿದ್ದು, ಇದು ಬ್ರಹ್ಮನು ಸೃಷ್ಟಿಯನ್ನು ಆರಂಭಿಸಿದ ದಿನವೆಂದು ನಂಬಲಾಗಿದೆ. ಹೊಸ ಚಿಗುರು, ವಸಂತ ಋತುವಿನ ಆಗಮನ ಮತ್ತು ಜೀವನದ ಏರಿಳಿತಗಳನ್ನು ಬೇವು-ಬೆಲ್ಲ ಸಮಾನವಾಗಿ ಸ್ವೀಕರಿಸುವ ಸಂದೇಶ ಸಾರುವ ಈ ಹಬ್ಬವು, ಹೊಸ ಆಶಯ, ಸಮೃದ್ಧಿ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ ಹಾಗೂ ಯುಗಾದಿಯು ಕೇವಲ ಹಬ್ಬವಲ್ಲ, ಹಳೆಯ ಕಹಿ ನೆನಪುಗಳನ್ನು ಮರೆತು, ಹೊಸ ಭರವಸೆಯೊಂದಿಗೆ ಬದುಕನ್ನು ಆರಂಭಿಸುವ ಹಬ್ಬವಾಗಿದೆ ಎಂದರು.

ಈ ಸಂಧರ್ಭದಲ್ಲಿ ಹಿತಿಹಾಸ ಅಕಾಡಮಿ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಬಿ.ಆರ್.ಕೃಷ್ಣಾ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್ ಸಿದ್ದಿಕ್, ಕಾರ್ಯದರ್ಶಿ ಎಸ್.ಎಸ್. ಶ್ರೀನಿವಾಸ್‌, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಎಸ್.ಸುರೇಶ್, ನಾಮನಿರ್ದೇಶನ ಸದಸ್ಯ ಮಣಿಕಂಠ, ಹಿರಿಯ ಪತ್ರಕರ್ತ ಕರೀಂಸಾಬ್, ಪತ್ರಕರ್ತರಾದ, ಎ.ಜಿ.ನಾರಾಯಣಸ್ವಾಮಿ, ಗೋಪಾಲ್ ರೆಡ್ಡಿ, ಸುಬ್ಬು,ನಾಗರಾಜ್‌, ಬಾಬು, ರಂಗನಾಥ್ ಸೇರಿದಂತೆ ಮತ್ತಿತರರು ಇದ್ದರು...

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456