ಕೋರಚ ಕೋರಮ ಸಮುದಾಯವನ್ನು ಶಾಸಕರು ಸರ್ಕಾರ ಕಡೆಗಣಿಸಿದ್ದಾರೆ ಕೋಲಾರ ಜಿಲ್ಲಾಧ್ಯಕ್ಷ ಸಿ.ವಿ ಬಾಲಕೃಷ್ಣ ಆರೋಪ
ಕೆಜಿಎಫ್: ವಿಧಾನಸಭಾ ಕ್ಷೇತ್ರದಲ್ಲಿ ಕೋರಚ ಕೋರಮ ಸಮುದಾಯವು ಅಲ್ಪಸಖ್ಯಾತರಾಗಿದ್ದು, ನಮ್ಮ ಸಮುದಾಯವು ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ತೀರ ಹಿಂದುಳಿದಿದ್ದು, ಶಾಸಕಿ ಎಂ.ರೂಪಕಲಾ ನಮ್ಮ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆ ಎಂದು ಕೋರಚ ಕೋರಮ ಸಮುದಾಯದ ಕೋಲಾರ ಜಿಲ್ಲಾಧ್ಯಕ್ಷ ಸಿ.ವಿ ಬಾಲಕೃಷ್ಣ ನೇರವಾಗಿ ಆರೋಪಿಸಿದರು.
ನೂಲಿಚಂದಯ್ಯ ರವರ 918 ನೇ ಜಯಂತಿ ಅಂಗವಾಗಿ ಬೇತಮಂಗಲ ಬಸ್ ನಿಲ್ದಾಣದ ಡಾ. ಅಂಬೇಡ್ಕರ್ ಪ್ರತಿಮೆಗೆ ಪ್ರತಿಮೆಗೆ ಮಾರ್ಲಾಪಣೆಗೊಳಿಸಿ ವಿವಿಧ ಹಳ್ಳಿಗಳಿಂದ ಬಂದಿದ್ದ ಪಲ್ಲಕ್ಕಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಬಳಿಯು ಸಹ ಒಂದು ಮತವಿದೆ ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕಾದ ಸಮಯ ಬರಲಿದೆ ಎಂದರು.
ಕಳೆದ 3 ವರ್ಷಗಳ ಹಿಂದೆ ಸರ್ಕಾರ ನುಲಿಯ ಚಂದಯ್ಯ ಜಯಂತಿ ಆಚರಣೆಗೆ ಆದೇಶಿಸಿದೆ . ಸ್ಥಳೀಯ ಕೆಜಿಎಫ್ ಶಾಸಕಿ ಎಂ.ರೂಪಕಲಾ ರವರನ್ನು ನುಲಿಚಂದಯ್ಯ ರವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡುತ್ತಿದ್ದರು ನಮ್ಮ ಆಹ್ವಾನವನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೇವಲ ನಮ್ಮ ಸಮುದಾಯ ಮಾತ್ರವಲ್ಲ ದಲಿತ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಹಿಡಿದು ಗ್ರಾಮ ಪಂಚಾಯ್ತಿ ಮಟ್ಟದ ಅಧಿಕಾರಿಗಳವರೆಗೂ ನೂಲಿಚಂದಯ್ಯ ರವರನ್ನು ಕಡೆಗಣಿಸಿದ್ದಾರೆ ಇದು ನಮ್ಮ ಸಮುದಾಯಕ್ಕೆ ನೋವು ತರುವ ಸಂಗತಿಯಾಗಿದೆ ಎಂದು ಹೇಳಿದರು.
ಶಾಸಕರು ಕೇವಲ ಪ್ರಭಲ ಸಮುದಾಯದ ಜಯಂತಿಗಳಾದರೆ ಮಾತ್ರ ಕಡ್ಡಾಯವಾಗಿ ಭಾಗವಹಿಸುವುದನ್ನು ರೂಡಿಸಿಕೊಂಡಿದ್ದಾರೆ ಆದರೆ ಕೋರಮ ಕೋರಚ ಸಮುದಾಯದವರು ಕಾರ್ಯಕ್ರಮಗಳಿಗೆ ಆಹ್ವಾನ ನೀಡಿದರೆ ಗೈರು ಆಗುತ್ತಾರೆ ಮತ್ತು ಅಲ್ಪಸಂಖ್ಯಾತ ಸಮುದಾಯದ ಜನರಿಂದ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ತಿಳಿದುಕೊಂಡಿದ್ದಾರೆ ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ ಶಾಸಕರು ತಮ್ಮ ದೊರಣೆಯನ್ನು ಬದಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕೋರಮ ಕೋರಚ ಸಮುದಾಯವನ್ನು ಸಾಮಾನ್ಯ ವರ್ಗಕ್ಕೆ ಮೀಸಲುಗೊಸುವ ಸಂಚು ನಡೆಯುತ್ತಿದೆ
ಕೋರಮ ಕೋರಚ ಸಮುದಾಯವನ್ನು ಸರ್ಕಾರ ಸಾಮಾನ್ಯ ವರ್ಗಕ್ಕೆ ಮೀಸಲುಗೊಳಿಸುವ ಹುನ್ನಾರ ನಡೆಸುತ್ತಿದೆ ಇಂತಹ ಕಾರ್ಯಕ್ಕೆ ಕೈಹಾಕಿದರೆ ನಮ್ಮ ಸಮುದಾಯವು ಉಗ್ರವಾದ ಹೋರಾಟವನ್ನು ಮಾಡುತ್ತದೆ ಎಂದರು.
ಜಿಲ್ಲಾ ತಾಲ್ಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಮೀಸಲಾತಿ ನೀಡಬೇಕು
ನಮ್ಮ ಸಮುದಾಯವು ಅಲ್ಪಸಂಖ್ಯಾತ ಸಮುದಾಯವಾಗಿರುವುದರಿಂದ ಮುಂಭಾರುವ ಜಿಲ್ಲಾ ಪಂಚಾಯ್ತಿ ತಾಲ್ಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ನಮ್ಮ ಸಮುದಾಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಟಿಕೇಟ್ ನೀಡಬೇಕು ಮತ್ತು ಸ್ಥಾನಮಾನಳನ್ನು ಕಲ್ಪಸಬೇಕು ಎಂದು ಆಗ್ರಹಪಡಿಸಿದರು.
ಹನ್ನೆಡೆನೆಯ ಶತಮಾನದ ಕನ್ನಡನಾಡಿನ ಚರಿತ್ರೆಯಲ್ಲಿ ಅತ್ಯಂತ ಗಮನಾರ್ಹವಾದ ಕಾಲವಾಗಿದ್ದು ಶತಶತಮಾನಗಳಿಂದ ಉಳ್ಳವರ ರಕ್ಷಬಾಹುಗಳಲ್ಲಿ ಬಂಧಿಯಾಗಿ ಶೋಚನೀಯ ಬದುಕು ಸಾಗಿಸುತ್ತಿದ್ದ ಜನಸಮುದಾಯಕ್ಕೆ ಜೀವ ಜಲವಾಗಿ ಬಂದ ಬಸವಾದಿ ಶರಣರು ಕೆಳವರ್ಗದ ಜನರಲ್ಲಿ ಆತ್ಮಾಭಿಮಾನ ತುಂಭಿದರಲ್ಲದೆ ಅವರು ಸಮಾಜದಲ್ಲಿ ಗೌರವಯುವಾಗಿ ತಲೆಯೆತ್ತಿ ಬದುಕುವಂತೆ ಮಾಡಿದರು ಬಸವಾದಿ ಪ್ರಮಥರು ಕಾಯಕ ಸಿದ್ದಾಂತಕ್ಕೆ ಆದ್ಯತೆ ನೀಡಿ ಆ ಮೂಲಕ ದುಡಿಯುವ ವರ್ಗ ಅಥವಾ ಕಾಯಕ ಸಮಾಜದ ಔನ್ನತ್ಯಕ್ಕೆ ಅನುವು ಮಾಡಿಕೊಟ್ಟರು ನಾಡಿನ ಪ್ರತಿಯೊಬ್ಬರು ದುಡಿದೇ ಉಣ್ಣಬೇಕು ಪರರ ದುಡಿಮೆಯಲ್ಲಿ ತಿಂದುಂಡು ಬದುಕಬಾರದೆಂಬ ಸಿದ್ದಾಂತವನ್ನು ಜನಮಾನಸದಲ್ಲಿ ಬಿತ್ತಿದರು, ವ್ಯಕ್ತಿಯ ಯೋಗ್ಯತೆ ಹುಟ್ಟಿನಿಂದ ನಿರ್ಧಾರವಾಗಬಾರದು ಎಂದು ಶರಣರು ಬಯಸಿದರು ಈ ಸಾಮಾಜಿಕ ಧಾರ್ಮಿಕ ಮತ್ತು ಆರ್ಥಿಕ ಕ್ರಾಂತಿಗೆ ನಿಸ್ಸಂದೇಹವಾಗಿ ಬಸವಣ್ಣರೇ ನಾಯಕನಾದರೂ ಅವರೊಂದಿಗೆ ಕೈಜೋಡಿಸಿದ ಸಾವಿರಾರು ಶರಣ ಶರಣೆಯರು ಎಂದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ವೆಂಕಟ್ರಮ್ ,ಎನ್.ಜಿ.ಹುಲ್ಕೂರು ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮುರಳಿಮೋಹನ್, ಶಂಕರ್, ಸಮರಾಜ್,ಮುನಿರಾಜ್, ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ್, ಮಾಜಿ ತಾಲ್ಲೂಕು ಪಂಚಾಯ್ತಿ ನಾಗರಾಜ್ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು..
ಚಿತ್ರ: 01 ನುಲಿಯ ಚಂದ್ರಯ್ಯ ರವರ 918 ನೇ ಜಯಂತಿ ಅಂಗವಾಗಿ ಬೇತಮಂಗಲದಲ್ಲಿ ಪಲ್ಲಕ್ಕಿಗಳಿಗೆ ಚಾಲನೆ ನೀಡಿದ ಸಮುದಾಯದ ಮುಖಂಡರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
