ಪಂಗನಾಮ ತಿಮ್ಮಣ್ಣದಾಸರು

Jun 29, 2025 - 18:02
 0  16
ಪಂಗನಾಮ ತಿಮ್ಮಣ್ಣದಾಸರು

ಆದವಾನಿ ಕ್ಷೇತ್ರದ ರುಕ್ಕಣ್ಣನೆಂಬುವರ ಕುಮಾರನಾಗಿ ಪಂಗನಾಮ ತಿಮ್ಮಣ್ಣದಾಸರು ಜನಿಸಿದರು. ಆದವಾನಿಯ ದೊರೆ "ಒಸಾಲತ್ತು ಜಂಗನು" ತಿಮ್ಮಣ್ಣನವರ ವಿದ್ವತ್ತಿಗೆ ಮರುಳಾಗಿ ಅವರನ್ನು ತನ್ನ ರಾಜ್ಯಕ್ಕೆ ದಿವಾನರನ್ನಾಗಿ ಮಾಡಿಕೊಂಡನೆಂಬ ನಂಬಿಕೆಯಿದೆ. ದಿವಾನ ಪದವಿಯೇನೂ ಅಷ್ಟು ಸುಲಭದಲ್ಲಿ ಎಲ್ಲರಿಗೂ ದೊರಕುವುದಿಲ್ಲ. ಇಂಥ ಉನ್ನತ ಪದವಿಯಲ್ಲಿದ್ದಾಗ ದಿವಾನರುಗಳು ರಾಜ್ಯಭಾರವನ್ನು, ಆಡಳಿತ ಕ್ರಮವನ್ನು ನೋಡಿಕೊಳ್ಳಬೇಕಾಗುತ್ತದೆ. ಅದರಂತೆಯೇ ಅವರ ಅಂತಸ್ತಿಗೂ ಭೋಗ ಭಾಗ್ಯಗಳಿಗೂ ಕಡಿಮೆಯೇನೂ ಇರುವುದಿಲ್ಲ. ತಿಮ್ಮಣ್ಣನವರಿಗೆನೋ ಉನ್ನತ ಪದವಿ ದೊರಕಿತು. ಸಾಮಾನ್ಯ ಒಬ್ಬನಾಗಿದ್ದರೆ ದಿವಾನ ಪದವಿಯನ್ನು ಚೆನ್ನಾಗಿ ರೂಡಿಸಿಕೊಂಡು ಸುಖದಿಂದ ಕಾಲ ಕಳೆಯುತ್ತಿದ್ದನು. ಬೇಕು ಬೇಕಾದಲ್ಲ ಇದ್ದರೂ ತಿಮ್ಮಣ್ಣನವರಿಗೆ ದಿವಾನ ಪದವಿ ರುಚಿಸಲಿಲ್ಲ. ಅವರದು ಮಹಾ ಚೇತನ ಸಾಮಾನ್ಯ ಭೋಗ ಭಾಗ್ಯ ಗಳಿಗಿಂತಲೂ ಮಿಗಿಲಾಗಿ ಅವರಿಗೆ ಪಾರಮಾರ್ಥಿಕವೇ ಆಕರ್ಷಕವಾಗಿದೆ. ಲೌಕಿಕ ಪದವಿಯಲ್ಲಿ ಕಾರ್ಯನಿಷ್ಠೆಯಲ್ಲಿ ಅವರಿಂದ ಸರಿಯಾಗಿ ಸೇವೆ ಮಾಡುವುದಾಗಲಿಲ್ಲ. ಇದು ಸಾಲದೆಂಬಂತೆ ದಾಸವರೇಣ್ಯರಾದ ವಿಜಯದಾಸರ ಪ್ರಭಾವ ಅವರ ಮೇಲೆ ಆಗಾಗ ಉಂಟಾಗುತ್ತಿತ್ತು. ಈ ಚೇತನ ದಿವ್ಯಾನುಭವವನ್ನು ಹೊಂದುವ ಕಾಲ ಬಂದಾಗ ಇವರ ಮೇಲೆ ದಾಸವೇರಣ್ಯರಾದ ವಿಜಯದಾಸರ ಅನುಗ್ರಹ ಉಂಟಾಯಿತು. ದಾಸವರೇಣ್ಯರು ಇವರಿಗೆ ಉಪದೇಶ ಮಾಡಿ "ವೇಣುಗೋಪಾಲ ವಿಠಲ" ಅಂಕಿತ ನೀಡಿದರು. ಪಂಗನಾಮ ಬಿರುದಿನಿಂದ ಶೋಭಿಸುತ್ತಿದ್ದ ತಿಮ್ಮಣ್ಣದಾಸರು ಅನೇಕ ಪವಾಡಗಳನ್ನು ಮೆರೆದವರಾಗಿದ್ದಾರೆ. ತಿಮ್ಮಣ್ಣದಾಸರ ಶಿಷ್ಯರಲ್ಲಿ ನರಸಿಂಹ ವಿಠಲ, ವ್ಯಾಸ ವಿಠಲ ಎಂಬುವರು ಮುಖ್ಯರಾದವರು.

 "ಕೇಶವದಾಮೋದರಾಚ್ಯುತ, ಬಾರ ಪರಿಹಾರಭವ ವಿಮೋಚನ ನೀರಜಾಕ್ಷ ಸುನಿಗಮವೇದ್ಯನೇ|| ಹಾರ ಕೌಸ್ತುಭ ಹೃದಯ ಶೋಭಿತ, ಗಜ ನೈಪವನಿತೆ ವಸುಧೆಯ ಕಾಯ್ದ ವೇಣುಗೋಪಾಲ ವಿಠಲಾ" 

ಎಂದು ದಾಸರು ಹರಿಯನ್ನು ಸ್ತುತಿಸಿರುವುದು ಹೃದಯ ರಂಜಕವಾಗಿದೆ. ಭಗವಂತನ ಲೀಲಾಗಾನ ಸ್ಮರಣೆಯಲ್ಲಿ ಇಹಲೋಕದ ವೈಭವವನೆಲ್ಲ ತ್ಯಜಿಸಿ, ಮೋಕ್ಷದ ದಾರಿಯನ್ನು ಕಂಡುಕೊಂಡ ಸಾಧಕರ ಚರಿತ್ರೆಗೆ ನಿದರ್ಶನವಾಗಿ "ಪಂಗನಾಮ ತಿಮ್ಮಣ್ಣದಾಸ"ರ ಇಡೀ ಜೀವನವೇ ಮುಡಿಪಾಗಿಟ್ಟರು ಎಂದು ಹೇಳಬಹುದು.

ಉದಂತ ಶಿವಕುಮಾರ 

ಲೇಖಕ, ಬೆಂಗಳೂರು-560056

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456