ಮಾ. 3 ರಂದು ಕೆಜಿಎಫ್ನಲ್ಲಿ ಬುದ್ಧ ಹುಣ್ಣಿಮೆ ಆಚರಣೆ
ಕೆಜಿಎಫ್., ಮಾ. 3: ಕೆಜಿಎಫ್ ನಗರದ ಅಶೋಕ ದಮ್ಮ ಧೂತ ಬುದ್ದ ಸಂಘದ ಆಧ್ಯಾತ್ಮಕ ಮಂದಿರದಲ್ಲಿ ಮಾ.3 ರಂದು ಮಂಗಳವಾರ ಸಂಜೆ 6 ಗಂಟೆಗೆ ಬುದ್ದ ಹುಣ್ಣಿಮೆಯ ಆಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಅವರು ಭಾಗವಹಿಸುವರು.
ಮಹಾ ಬುದ್ದ ಸಂಸ್ಥೆಯ ಸಂಸ್ಥಾಪಕ ಆಚಾರ್ಯ ಬುದ್ದ ರಕ್ಷಿತ ಅವರ 104ನೇ ಜಯಂತೋತ್ಸವದ ಅಂಗವಾಗಿ ಧಮ್ಮ ಪಾದ ಉತ್ಸವವು ಇದೇ ಬುದ್ದ ಹುಣ್ಣಿಮೆಯ ಆಚರಣೆ ಕಾರ್ಯಕ್ರಮ ಸಂದರ್ಭದಲ್ಲಿ ವಿಶೇಷವಾದ ರೀತಿಯಲ್ಲಿ ನಡೆಯಲಿದೆ.
ಬೆಂಗಳೂರು ಮಹಾಬೋಧಿ ಸಮಾಜದ ಭಂತೇಜಿ ಧಮ್ಮಚಿತ್ತ ಮಹಾತೀರ, ಕಾರ್ಯದರ್ಶಿ ಭಂತೇಜಿ ಜೀನವಾಸಂ ಬಿಕ್ಕು, ಅಶೋಕ ದಮ್ಮ ದತ್ತ ಬೌದ್ದ ಸಮಾಜದ ಕಾರ್ಯದರ್ಶಿ ಭಂತೇಜಿ ಖೇಮಿಂಡೋ ಅವರುಗಳ ಸಾನ್ನಿದ್ಯದಲ್ಲಿ ಹಲವಾರು ಭಂತೇಜಿಗಳು, ಉಪಾಸಕರು ಮತ್ತು ಉಪಾಸಿಕರು ಭಕ್ತಿಭಾವದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಡುವರು.
ಧಮ್ಮ ಪಾದ ಉತ್ಸವ ಹಾಗೂ ಬುದ್ದ ಹುಣ್ಣಿಮೆಯ ಆಚರಣೆ ಕಾರ್ಯಕ್ರಮದಲ್ಲಿ ಸಮಸ್ತ ನಾಗರೀಕ ಬಂಧುಗಳು, ಬುದ್ದನ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಬುದ್ದ ಸಂಘದ ಉಪಾಸಕ ಡಾ|| ಆರ್. ಪ್ರಭುರಾಂ ಅವರು ಕೋರಿದ್ದಾರೆ.
ಮಾ.3 ರಂದು ಮಂಗಳವಾರ ಸಂಜೆ 6 ಗಂಟೆಗೆ ನಡೆಯುವ ಧಮ್ಮ ಪಾದ ಉತ್ಸವ ಹಾಗೂ ಬುದ್ದ ಹುಣ್ಣಿಮೆಯ ಆಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಅವರನ್ನು ಬುದ್ದ ಗುರು ಕೆಮೆಂಡೋ ಬಂತೇಜಿ, ಉಪಾಸಕ ಡಾ|| ಆರ್.ಪ್ರಭುರಾಂ, ಪ್ರತಾಫ್ಕುಮಾರ್ ಅವರುಗಳು ಸಾಂಪ್ರದಾಯಿಕವಾಗಿ ಆಮಂತ್ರಿಸಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
