ಅಂಬೇಡ್ಕರ್ ಭವನ ಸದ್ಬಳಕೆ ಮಾಡಿಕೊಳ್ಳಬೇಕು : ಶಾಸಕ ಎ.ಆರ್.ಕೃಷ್ಣಮೂರ್ತಿ
ಸಂತೆಮರಹಳ್ಳಿ: ದೇಶವಳ್ಳಿಯಲ್ಲಿ ಮುಂದುವರಿದ ಅಂಬೇಡ್ಕರ್ ಭವನದ ಕಾಮಗಾರಿಗೆ ಗುದ್ದಲಿಪೂಜೆ
ಸಾಮಾಜಿಕ, ಧಾರ್ಮಿಕ ಹಾಗೂ ವಿವಿಧ ಚಟುವಟಿಕೆಗಳಿಗೆ ಅಂಬೇಡ್ಕರ್ ಭವನ ಸದ್ಬಳಕೆ ಆಗಬೇಕು ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ತಾಲೂಕಿನ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ದೇಶವಳ್ಳಿಯಲ್ಲಿ ಮುಂದುವರಿದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಾಮಗಾರಿಗೆ ಗುದ್ದಲಿಪೂಜೆ ನೇರವೇರಿಸಿ ಮಾತನಾಡಿದರು. ಗ್ರಾಮದ ಮುಂದುವರಿದ ಅಂಬೇಡ್ಕರ್ಭವನ ಕಾಮಗಾರಿಗೆ 20 ಲಕ್ಷ ರೂ ಮಂಜೂರಾಗಿದ್ದು, ಸುಸಜ್ಜಿತವಾಗಿ ಭವನವನ್ನು ನಿರ್ಮಿಸಿಕೊಳ್ಳಬೇಕು. ಎಂದು ಸಲಹೆ ನೀಡಿದರು.ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾದಂತಹ ಸಂದರ್ಭದಲ್ಲಿ ಈ ಭಾಗದಲ್ಲಿ ಅಂಬೇಡ್ಕರ್ ಭವನಗಳಿಗೆ ಅನುದಾನ ನೀಡಿದ್ದು,... ಭವನಗಳು ನಿರುಪಯುಕ್ತವಾಗಿ ನಿಂತಿರುವುದು ವಿಷಾಧಕರ ಸಂಗತಿಯಾಗಿದೆ. ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಹೆಚ್.ವಿ.ಚಂದ್ರು,ಗ್ರಾ.ಪಂ.ಅಧ್ಯಕ್
ಮಾಜಿ ಸದಸ್ಯ ಡಿ.ಪಿ.ರಾಜು, ತಾ.ಪಂ.ಮಾಜಿ ಸದಸ್ಯ ಡಿ.ಪಿ.ಪ್ರಕಾಶ್,ವಿಶ್ವ ರೈತ ಸಂಘಟನಾ ಸದಸ್ಯರು ಹಾಗೂ ಪಾರಂಪರಿಕ ವೈದ್ಯರಾದ ಹೆಚ್ .ಸಿ .ಮಹೇಶ್ ಕುಮಾರ್ , ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಯೋಗೇಂದ್ರ, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ರಾಜೇಶ್, ಮುಖಂಡರಾದ ರಾಜೇಂದ್ರಸ್ವಾಮಿ, ಮಹದೇವಪ್ರಸಾದ್ ಫಸಿ, ನಿರ್ಮಿತಿ ಕೇಂದ್ರದ ಇಂಜಿನಿಯರ್ ನಂದೀಶ್, ಶಂಕರಪ್ಪ, ಪಿಡಿಓ ಮಮತಾ,ಸನಾವುಲ್ಲಾ ಗ್ರಾಮದ ಯಜಮಾನರು, ಮುಖಂಡರು ಹಾಜರಿದ್ದರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
