ಅನಾಧಿಕಾಲದ -ಯುಗಾದಿ
ಕಪ್ಪು ಕತ್ತಲೆಯ ಸೀಳಿ, ಹೊಂಗಿರಣಗಳ ಹೊತ್ತು, ಪಂಚಭೂತಗಳೇ ಪರವಶವಾಗಲು, ಹಳ್ಳಿಗೂ ದಿಲ್ಲಿಗೂ ಬೆರಗಿನ ಬೆಳಕು ಮೂಡಿದೆ ಯುಗಾದಿ.
ಹಸಿರು ಹಾಸಿ ನಗುವ ವೈಯಾರಿ, ಹಣ್ಣು ಹಂಪಲು ದವಸ ಧಾನ್ಯ ಸೃಷ್ಟಿಸುವ ಸುಕುಮಾರಿ, ನೂತನ ಸಂವತ್ಸರ ಆಚರಿಸುವ ವಿಹಾರಿ ಯುಗಾದಿ.
ಕರುನಾಡ ಮಣ್ಣಲಿ, ಮಾಧುರ್ಯದ ಕಂಪಿನಲಿ, ಭಿನ್ನ ಭಿನ್ನ ಸಂಸ್ಕೃತಿಯ ಜನಗಳಲಿ, ವರ್ಗ ವೈಷಮ್ಯಗಳ ಮರೆಸಿ, ಬುನಾದಿ ಹಾಕಿದೆ ಯುಗಾದಿ .
ಆಗ್ರಹಿಸಿ ಆಚರಿಸದಿದ್ದರೆ ವ್ಯಾದಿ, ಅನುಗ್ರಹಿಸಿ ಆಚರಿಸಿದರೆ ಆಯುನಿಧಿ, ಚಿರಕಾಲ ಹಸಿರಾಗಿ ಜೀವಿಸಲು, ಜೀವನದಿ ಈ ಯುಗಾದಿ.
ಸಜ್ಜನರ ಲಾಲಿಸುವ ಉಪಕಾರಿ, ಪ್ರೀತಿ ಪ್ರೇಮ ಮಮಕಾರಕ್ಕೆ ಸಹಕಾರಿ, ಮೈತ್ರಿ ಸಂಬಂಧ ಅನುಬಂದಕ್ಕೆ ಶುಭಕಾರಿ.
ಅನಾದಿಕಾಲದ ವೈಯಾರಿ ಯುಗಾದಿ.
ಕಹಿ ಜ್ಞಾಪಕ ಬಿಟ್ಟು, ಸಿಹಿ ಬದುಕ ನೆನಪಿನಲ್ಲಿ ಇಟ್ಟು, ನವರಸಗಳ ಬಾಯಿಗೆ ಬಿಟ್ಟು, ಹೊಸ ಚಿಗುರಿನಂತೆ ಕಂಗೊಳಿಸಲಿ, ಜಗದಿ ಯುಗಾದಿ.
ಪ್ರಜಾ ಕವಿ ✍️
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
