ಉಜ್ವಲ ಭವಿಷ್ಯಕ್ಕಾಗಿ ಸಾಧನೆ ನಿರಂತರವಾಗಿರಲಿ:ಪೂಜ್ಯ ಶಿವಯೋಗಿ ಶಿವಾಚಾರ್ಯ ಶ್ರೀ
ಹಾವೇರಿ: ಸಾಧನೆ ಹಿಂದೆ ಸಾಕಷ್ಟು ಕಷ್ಟಗಳು ಹಾಗೂ ಸವಾಲುಗಳಿರುತ್ತವೆ. ಎಲ್ಲವನ್ನು ಎದುರಿಸಿ ಶ್ರದ್ದೆಯಿಂದ ಅದ್ಯಯನ ಮಾಡಿ ಆದಿಕ ಅಂಕ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಗೌರಿಮಠದ ಪೂಜ್ಯ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಗರದ ಕರ್ಜಗಿ, ಹಾವೇರಿ ಗೌರಿಮಠದ ಶ್ರೀ ಮಲ್ಲಿಕಾರ್ಜುನ ಆಂಗ್ಲ ಮಾದ್ಯಮ ಶಾಲೆಯ ಅಧಿಕ ಅಂಕ ಪಡೆದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು ಸಾಧನೆ ನಿಂತ ನೀರಾಗದೆ ನಿರಂತರವಾಗಿರಬೇಕು ಹಾಗೂ ಸಾಧನೆಗೆ ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಹೀಗೆ ಎಲ್ಲರ ಶ್ರಮ, ಪ್ರೋತ್ಸಾಹ ಇರಬೇಕು ಎಂದರು.
ಮುಖ್ಯೋಪಾಧ್ಯಯರಾದ ಶ್ರೀ ಶಂಕರ ಅಕ್ಕಸಾಲಿ ಅವರು ಮಾತನಾಡಿ ಮಕ್ಕಳು ಆಲಸ್ಯ ಬಿಟ್ಟು ಶ್ರದ್ದೆಯಿಂದ ಅಭ್ಯಾಸ ಮಾಡಿ ಉತ್ತಮ ಅಂಕ ಪಡೆದು ಶಾಲೆ ಪಾಲಕರಿಗೆ ಕಿರ್ತಿ ತರಬೇಕು ನಮ್ಮ ಶಾಲೆಯ ಮಕ್ಕಳು ಉತ್ತಮ ಅಂಕ ಪಡೆದು ನೂರಕ್ಕೆ ನೂರು ಫಲಿತಾಂಶ ಬಂದಿರುವುದು ಶಾಲೆಗೆ ಕೀರ್ತಿ ತಂದಿದೆ ಎಂದರು.
ಅಧಿಕ ಅಂಕ ಪಡೆದ ಕುಮಾರಿ ದಾನೇಶ್ವರಿ ಹಿರೇಮಠ, ಭವಾನಿ ಹಿರೇಮಠ, ಗೌಸಿಯಾ ಬೂದಗಟ್ಟಿ, ಸೂಪಿಯಾ ತಿಮ್ಮಾಪುರ,ಅವರನ್ನು ಶ್ರೀಗಳು ಸನ್ಮಾನಿಸಿದರು
ಸನ್ಮಾನ ಸ್ವೀಕರಿಸಿದ ಕುಮಾರಿ ದಾನೇಶ್ವರಿ ಹಿರೇಮಠ, ಭವಾನಿ ಹಿರೇಮಠ, ಗೌಸಿಯಾ ಬೂದಗಟ್ಟಿ, ಸೂಪಿಯಾ ತಿಮ್ಮಾಪುರ ಮಾತನಾಡಿ ಶ್ರೀಗಳ ಆಶೀರ್ವಾದ, ಶಿಕ್ಷಕರ ಪ್ರೋತ್ಸಾಹ, ಸಹಕಾರದಿಂದ ಉತ್ತಮ ಪಡೆಯಲು ಸಾಧ್ಯವಾಗಿದೆ ಎಂದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಪ್ರದಾನ ಕಾರ್ಯದರ್ಶಿ ಡಾ. ಗಂಗಯ್ಯ ಕುಲಕರ್ಣಿ, ಪಾಲಕರು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.
ಶಿಕ್ಷಕ ಮಾಂತೇಶ ಸಂಗೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
