ತಂದೆ ತಾಯಿ ಗುರುಗಳೇ ನಮ್ಮ ಕಣ್ಣಿಗೆ ಕಾಣುವ ದೇವರು :ಜಗದೀಶ ತಾತರೆಡ್ಡಿ
ಮುದ್ದೇಬಿಹಾಳ: ತಂದೆ ತಾಯಿ ಗುರುಗಳೇ ನಮ್ಮ ಕಣ್ಣಿಗೆ ಕಾಣುವ ದೇವರು ಎಂದು ಹೇಳಿದರು.
ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ಶ್ರೀ ಅಮರೇಶ್ವರ ಪಬ್ಲಿಕ್ ಶಾಲೆಯಲ್ಲಿ ಮಾರ್ಚ್ 11 ರಂದು ಹಮ್ಮಿಕೊಂಡ ಮಕ್ಕಳಿಂದ ತಂದೆ-ತಾಯೆಂದೆರ ಪಾದ ಪೂಜೆ ಹಾಗೂ ತಂದೆ-ತಾಯಂದಿಯರಿಂದ ಮಕ್ಕಳಿಗೆ ಕೈತುತ್ತು ನೀಡುವ ಕಾರ್ಯಕ್ರಮದಲ್ಲಿ ಜಗದೀಶ ತಾತರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ನಾಡಿನ ನಮ್ಮ ದೇಶದ ಸಂಸ್ಕಾರ ಸಂಸ್ಕೃತಿ ಉಳಿಸುವುದರಲ್ಲಿ ಶ್ರೀ ಅಮರೇಶ್ವರ ಪಬ್ಲಿಕ್ ಶಾಲೆ ಜ್ಞಾನ ಸಮೃದ್ಧಿ ಗುರುಕುಲ ಕಲಿಯುವ ಮನೆ ನಾಲತವಾಡ ಬಹು ಮುಖ್ಯ ಪಾತ್ರ ವಹಿಸುತ್ತಿದೆ ಎಂದರು. ಹಣಮಂತ ಕುರಿ ಮಾತನಾಡಿ ವಿದ್ಯೆಯೇ ಬಾಳಿನ ಬೆಳಕು ನಮ್ಮ ಶಾಲೆಯ ಶಿಕ್ಷಕರ ಹಾಗೂ ಮಕ್ಕಳ ಪ್ರಗತಿ ಕಂಡು ಸಂತೋಷವಾಯಿತು ಎಂದು ಹೇಳಿದರು. ಮಕ್ಕಳಿಗೆಲ್ಲ ಸಿಹಿಯನ್ನು ವಿತರಿಸಿದರು.
ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷರಾದ ಜಗದೀಶ ತಾತರೆಡ್ಡಿ ಹಾಗೂ ಮುಖ್ಯ ಅತಿಥಿಗಳಾಗಿ ಮೇಲ್ವಿಚಾರಕ ಸದಸ್ಯರಾದ ಹಣಮಂತ ಕುರಿ, ಮಾಂತೇಶ ಮನದಾಳಮಠ, ಪಾಲಕರಾದ ಬಿಸಿಎಂ ಹಾಸ್ಟೆಲ್ ವಾರ್ಡನ್ ಶರಣಮ್ಮ ಹುಗ್ಗಿ, ಗಂಗಪ್ಪ ದೊಡ್ಡಮನಿ, ಶಂಕ್ರಪ್ಪ ನವಲಿ, ರಸೂಲ ಖಾಜಿ, ಮತ್ತು ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಭಾಗ್ಯಶ್ರೀ ಸಂಗಮೇಶ ನವಲಿ, ದೇಸಾಯಿಗೌಡ್ರ, ಸಹಶಿಕ್ಷಕಿಯರಾದ ಲಕ್ಷ್ಮೀ ಸಂಕೇಶ್ವರ, ಪರಶುರಾಮ ವಾಲೀಕಾರ, ಜ್ಯೋತಿ ಬಸನಗೌಡ್ರ, ಸಹಾಯಕಿ ಗುರುದೇವಿ ಬಿರಾದಾರ, ಪಾಲಕರು ಹಾಗೂ ಶಾಲಾ ಮುದ್ದು ಮಕ್ಕಳು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
