ಸಮೃದ್ಧಿ ಎಲೆಕ್ಟ್ರಾನಿಕ್ ಮಳಿಗೆ ಪ್ರಾರಂಭೋತ್ಸವಕ್ಕೆ ಕೊಳ್ಳೇಗಾಲ ಶಾಸಕ ಎ ಆರ್ ಕೆ ಚಾಲನೆ
ಚಾಲನೆ ಸಂಟೆಮರಹಳ್ಳಿ: ಇಲ್ಲಿನ ಮೈಸೂರು ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾದ ಸಮೃದ್ಧಿ ಎಲೆಕ್ಟ್ರಾನಿಕ್ ಮಳಿಗೆಯನ್ನು ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣ ಮೂರ್ತಿ ಉದ್ಘಾಟನೆಗೆ ಚಾಲನೆ ನೀಡಿದರು. ಈ ವೇಳೆಯಲ್ಲಿ ಮಾತನಾಡಿ ಸಂತೆಮರಹಳ್ಳಿಯಲ್ಲಿ ನೂತನವಾಗಿ ಆರಂಭವಾಗಿರುವ ಸಮೃದ್ಧಿ ಎಲೆಕ್ಟ್ರಾನಿಕ್ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಎಲೆಕ್ಟ್ರಾನಿಕ್ ವಸ್ತುಗಳನ್ನು ಜನರಿಗೆ ತಲುಪಿಸುವಲ್ಲಿ ಮುಂದಾಗಬೇಕು ಹಾಗೂ ಅತ್ಯುತ್ತಮ ಸೇವೆಯನ್ನು ನೀಡಿದ್ದಲ್ಲಿ ಸಮೃದ್ಧಿ ಎಲೆಕ್ಟ್ರಾನಿಕ್ ಸಮೂಹ ಬೆಳೆಯುವಲ್ಲಿ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ( ನಿವೃತ್ತ ಪೊಲೀಸ್ ಅಧಿಕಾರಿ) ಪುಟಸ್ವಾಮಿ, ಗ್ರಾ ಪಂ ಸದಸ್ಯ ಎಂ ಪಿ ಶಂಕರಪ್ಪ, ಶಿವುಕುಮಾರ್, ಸುಗಂಧರಾಜ್, ಗುಂಡೂರಾವ್, ಪಿ ಎಸ್ ಐ ತಾಜುದ್ದೀನ್, ಕಲಾವಿದ ಎಂ ಪಿ ರಾಜು, ಮುಖಂಡರಾದ ಮಹದೇವೇಗೌಡ ಮತ್ತಿರರು ಹಾಜರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
