ದಾನಗಳಲ್ಲಿ ವಿದ್ಯಾದಾನವು ಅತ್ಯಂತ ಶ್ರೇಷ್ಟವಾದದು-ಬಿಇಒ ಎನ್.ವೆಂಕಟೇಶಪ್ಪ

Jun 21, 2025 - 17:08
 0  3
ದಾನಗಳಲ್ಲಿ ವಿದ್ಯಾದಾನವು ಅತ್ಯಂತ ಶ್ರೇಷ್ಟವಾದದು-ಬಿಇಒ ಎನ್.ವೆಂಕಟೇಶಪ್ಪ

ಬಾಗೇಪಲ್ಲಿ; ದಾನಗಳಲ್ಲಿ ವಿದ್ಯಾದಾನ ಅತ್ಯಂತ ಪವಿತ್ರ ಮತ್ತು ಶ್ರೇಷ್ಟವಾದದು ಇದು ಜಗತ್ತಿನಲ್ಲಿ ಸಾರ್ವಕಾಲಿಕ ಸತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಗೂಳೂರು ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಶಿಕ್ಷಣ ಇಲಾಖೆ, ಬೆಂಗಳೂರು ಗ್ರಾಮ ವಿಕಾಸ ಲೋಕಸೇವಾ ಪ್ರತಿಷ್ಟಾನ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆ ಹಾಗೂ 2025-26 ನೇ ಸಾಲಿನ ಕಲಿಕಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಡೀ ಜಗತ್ತಿನಲ್ಲಿ ರಕ್ತದಾನ ಅನ್ನದಾನ, ನೇತ್ರದಾನ, ಅಂಗಾAಗದಾನ ಸೇರಿದಂತೆ ಹಲವಾರು ದಾನಗಳ ಮಾಡಲಾಗುತ್ತೆ ಆದರೆ ಇವೆಲ್ಲಾ ದಾನಗಳಿಗಿಂತ ವಿದ್ಯಾದಾನವು ಅತ್ಯಂತ ಶ್ರೇಷ್ಟವಾಗಿದ್ದು ಕಾರಣ ಈ ವಿದ್ಯಾದಾನದಿಂದ ಸಮಾಜದಲ್ಲಿ ಮಕ್ಕಳು ಒಳ್ಳೆಯ ಸತ್ಪ್ರಜೆಗಳಾಗಿ, ಸಮಾಜಸುಧಾರಕರಾಗಿ, ಶ್ರೇಷ್ಟ ವಿದ್ಯಾವಂತರಾಗಿ ಹೊರ ಹೊಮ್ಮಲು ಸಾದ್ಯವಾಗುತ್ತದೆ, ಅನೇಕ ಸಾಧಕರನ್ನು ಹೊಂದಿದ ಈ ಶಾಲೆಗೆ ಒಂದು ಇತಿಹಾಸ ಇದೆ ಈ ಕ್ಷೇತ್ರದ ಶಾಸಕರೂ ಆದ ಸುಬ್ಬಾರೆಡ್ಡಿ ಅವರು ಇದೇ ಶಾಲೆಯಲ್ಲಿ ಓದಿ ಉನ್ನತ ಸ್ಥಾನಮಾನ ಪಡೆದು ಮುಂಬರುವ ದಿನಗಳಲ್ಲಿ ಸಚಿವ ಸ್ಥಾನ ಲಭಿಸುವ ಸಂಭವ ಹೆಚ್ಚಾಗಿದೆ ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳನ್ನು ನೀಡಿ ಫಲಿತಾಂಶ ಹೆಚ್ಚಿಸಲು ಶ್ರಮ ಪಡುತ್ತಿದೆ ಅದೇ ರೀತಿಯಲ್ಲಿ ಅನೇಕ ಕೊಡುಗೈ ದಾನಿಗಳ ಸಂಖ್ಯೆಯೂ ಹೆಚ್ಚಾಗಿದ್ದು ಶಾಲೆಯ ಆಬಿವೃದ್ದಿಗೆ ಶ್ರಮ ಪಡುತ್ತಿದ್ದಾರೆ ಈಗ ಬೆಂಗಳೂರು ಗ್ರಾಮ ವಿಕಾಸ ಲೋಕಸೇವಾ ಪ್ರತಿಷ್ಟಾನ ಎಂಬ ಸಂಸ್ಥೆಯು ಆಂದ್ರಪ್ರದೇಶದ ಗಡಿಭಾಗದಲ್ಲಿ ಇರುವ ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲು ಉತ್ತಮ ಫಲಿತಾಂಶ ಪಡೆಯಲು ಪ್ರೇರೇಪಣೆ ಮಾಡುತ್ತಿರುವುದು ತುಂಬಾ ಸಂತೋಷದ ಸಂಗತಿ ಈ ನಿಮ್ಮ ಸಹಕಾರ ಈಗೆಯೇ ಮುಂದುವರೆಯಲಿ ಎಂದರು.
ಬೆAಗಳೂರು ಗ್ರಾಮ ವಿಕಾಸ ಲೋಕಸೇವಾ ಪ್ರತಿಷ್ಟಾನ ಸಂಸ್ಥೆಯ ಮುಖ್ಯಸ್ಥ ದೇವಿಕುಮಾರ್ ಮಾತನಾಡಿ ಇಂದು ವಿಶ್ವ ಯೋಗ ದಿನಾಚರಣೆ ಅಂದರೆ ನಿಮ್ಮ ಆರೋಗ್ಯ ಕಾಪಾಡುವ ದಿನ ಮೊದಲು ನಿಮ್ಮ ಆರೋಗ್ಯ ಚೆನ್ನಾಗಿ ಕಾಪಾಡಿಕೊಂಡರೆ ನಿಮ್ಮ ವಿದ್ಯಾಭ್ಯಾಸವೂ ಕೂಡಾ ಚೆನ್ನಾಗಿ ನಡೆಯುತ್ತದೆ ಆದ್ದರಿಂದ ನಾವು ನಿಮಗೆ ನೀಡುವ ಸೌಲಭ್ಯಗಳು ಅಲ್ಪ ಪ್ರಮಾಣದಲ್ಲಿ ಇರಬಹುದು ಆದರೆ ಇದರಿಂದ ಬಡ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಪ್ರತಿಯೊಂದು ಮಗುವು ಚೆನ್ನಾಗಿ ಓದಿ ಉತ್ತಮ ಫಲಿತಾಂಶ ಪಡೆಯಬೇಕು ಎಂಬುದೇ ನಮ್ಮ ಆಸೆ ಎಂದರು.

ಈ ಸಂದರ್ಭದಲ್ಲಿ ಗಣ್ಯರು 8, 9 ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಗಳನ್ನು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಆರ್.ವೆಂಕಟರಾಮಪ್ಪ, ಮುಖ್ಯ ಶಿಕ್ಷಕ ವಿ.ವೆಂಕಟೇಶ್, ಎನ್‌ಜಿಒ ಸಂಸ್ಥೆಯ ಸದಸ್ಯರಾದ ಎ.ಆರ್.ರಾಘವೇಂದ್ರ, ಕೈಗಾರಿಕೋದ್ಯಮಿ ಸದಾಶಿವ, ಟಿಪಿಇಒ ರಂಘನಾಥ, ಬಿರ‍್ಪಿ ಶಿವಪ್ಪ, ಶಿಕ್ಷಕರಾದ ವೆಂಕಟೇಶ್ ಮೂರ್ತಿ ಇನಾಯಿತುಲ್ಲಾ ಖಾನ್, ಎಸ್.ರಶೀದಾ, ಸತ್ಯನಾರಾಯಣ, ಪಿ.ಟಿ.ಸುಮಲತ, ತ್ಯಾಗರಾಜ್, ಎಸ್.ರಜಿತಾ, ಟಿ.ಎಲ್.ಪುಷ್ಪ ವಿದ್ಯಾರ್ಥಿಗಳು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456