ರಸ್ತೆ ದುರಸ್ಥಿ ಮಾಡಿಸುವಂತೆ ವಾಹನ ಸವಾರರ ಅಗ್ರಹ
ಸಂತೆಮರಹಳ್ಳಿ: ಕಮರವಾಡಿ ಗೇಟ್ ಇಂದ ಸಂತೆಮರಹಳ್ಳಿಗೆ ಹಾದು ಹೋಗುವ ರಸ್ತೆ ಬಗ್ಗೆ ಹೇಳೋರೋ ಕೇಳೋರಿಲ್ಲ ಏಕೆಂದರೆ ರಸ್ತೆ ಮುಕಾಂತರ ಹಾದು ಹೋಗುವ ವಾಹನ ಸವಾರರ ಗೋಳು ಅಷ್ಟಿಷ್ಟಲ್ಲ ಸುಮಾರು ನಾಲ್ಕು ಕಿಲೋಮೀಟರ್ ರಸ್ತೆ ತುಂಬಾ ಹದಗೆಟ್ಟಿದ್ದು ಅಲ್ಲಲ್ಲಿ ಗುಂಡಿಗಳು ಬಿದ್ದು ವಾಹನ ಚಲಾವಣೆ ಮಾಡಲು ಹರಾಸಾಹಸ ಪಡಬೇಕಾಗಿದೆ.
ಈ ರಸ್ತೆ ವಾಹನ ಸವಾರರಿಗೆ ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಚಲಾಯಿಸಬೇಕಾಗಿದೆ ಸಮರ್ಪಕವಾದ ರಸ್ತೆ ಇಲ್ಲದ ಕಾರಣ ವಾಹನ ಸವಾರರು ಈ ಭಾಗದ ಈ ಚುನಾಯಿತ ಪ್ರತಿನಿಧಿಗಳ ಮೇಲೆ ಇಡೀ ಶಾಪ ಹಾಕುತ್ತಿದ್ದಾರೆ.
ಈ ರಸ್ತೆ ಮುಕಾಂತರ ಸಾವಿರಾರು ವಾಹನಗಳು ಪ್ರತಿನಿತ್ಯ ಹೊರ ಜಿಲ್ಲೆ ಸೇರಿದಂತೆ ಹೊರ ರಾಜ್ಯಗಳಿಗೂ ಪ್ರಯಾಣ ಮಾಡುತ್ತಿದ್ದಾರೆ ಆದರೆ ಅವರ ಪಾಡು ಅಷ್ಟಿಷ್ಟಲ್ಲ ಎಂದರೆ ತಪ್ಪಾಗಲಾರದು.
ಈ ಭಾಗದಲ್ಲಿ ಪ್ರಮುಖ ರಾಜಕಾರಣಿಗಳು ಪ್ರಯಾಣ ಮಾಡಿದರು ಕಣ್ಣಿಗೆ ಕಂಡರೂ ಕಾಣದಂತೆ ಹೋಗುವುದು ವಿಪರ್ಯಾಸ ಅಲ್ಲವೇ.
ಈ ರಸ್ತೆ ಮೇಲೆ ಪ್ರಯಾಣ ಮಾಡುವ ವಯೋವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳ ಸ್ಥಿತಿ ಅಯೋಮಯ ಎಂದರೆ ತಪ್ಪಾಗಲಾರದು ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಈ ರಸ್ತೆ ಬಗ್ಗೆ ಗಮನ ಹರಿಸಿ ಸೂಕ್ತ ರೀತಿಯಲ್ಲಿ ರಸ್ತೆದುರಸ್ಥಿ ಮಾಡಿಸಿಕೊಡಬೇಕೆಂದು ಈ ಭಾಗದ ವಾಹನ ಸವಾರರು ಹಾಗೂ ಈ ಭಾಗದ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
What's Your Reaction?
Like
3
Dislike
0
Love
0
Funny
0
Angry
0
Sad
0
Wow
0
