ಕೆಂಪನಪುರ ಗ್ರಾಮದಲ್ಲಿ 134 ನೇ ಅಂಬೇಡ್ಕರ್ ಜಯಂತಿಗೆ ಚಾಲನೆ ನೀಡಿದ ಸಚಿವ ಎಚ್ ಸಿ ಮಹದೇವಪ್ಪ 

Jun 9, 2025 - 18:00
 0  12
ಕೆಂಪನಪುರ ಗ್ರಾಮದಲ್ಲಿ 134 ನೇ ಅಂಬೇಡ್ಕರ್ ಜಯಂತಿಗೆ ಚಾಲನೆ ನೀಡಿದ ಸಚಿವ ಎಚ್ ಸಿ ಮಹದೇವಪ್ಪ 

ಸಂತೆಮರಹಳ್ಳಿ : ಸಮೀಪದ ಕೆಂಪನಪುರ ಗ್ರಾಮದಲ್ಲಿ 134 ನೇ ಡಾ ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಆಚರಣಾ ಸಮಿತಿ ವತಿಯಿಂದ ಆಚರಣೆ ಮಾಡಲಾಯಿತು.

 ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಮಾತನಾಡಿ ಭಾರತ ದೇಶದಲ್ಲಿ ಅಂಬೇಡ್ಕರ್ ಸಂದೇಶಗಳನ್ನು ಮತ್ತು ತತ್ವಗಳನ್ನ ಅರ್ಥ ಮಾಡಿಕೊಳ್ಳುವ ಕಾಲ ಬಂದಿದೆ ತಪ್ಪಾಗಲಾರದು.

ಶೋಷಣೆಗೆ ಒಳಪಟ್ಟಿರುವ ಕೋಟ್ಯಂತರ ಜನರನ್ನ ರಕ್ಷಣೆ ಮಾಡುವುದೇ ಪ್ರಜಾಪ್ರಭುತ್ವ ಎಂದರು.

 ಭಾರತದ ವಿಮೋಚಣೆಗಾಗಿ ಹೋರಾಡಿದ ಪುಣ್ಯ ಪುರುಷ ಡಾ ಬಿ ಆರ್ ಅಂಬೇಡ್ಕರ್, ಹಾಗಾಗಿ ಪ್ರಜಾಪ್ರಭುತ್ವದ ಬಲ ಬಲವರ್ಧನೆಯಾಗಬೇಕು ಹಾಗೂ ಅವಕಾಶದಿಂದ ವಂಚಿತರಾದ ಸಮುದಾಯಕ್ಕೆ ಶಿಕ್ಷಣ ನೀಡಿದಂತ ಪುಣ್ಯ ಪುರುಷ ಎಂದು ಹೇಳಿದರು. 140 ಕೋಟಿ ಭಾರತ ದೇಶದ ಜನತೆಗೆ ಸಮಾನತೆ ಕಲ್ಪಿಸಿ ಕೊಟ್ಟ ಮಹಾನ್ ಚೇತನ ಅಂಬೇಡ್ಕರ್ ಎಂದು ತಿಳಿಸಿದರು.

ನಂತರ ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣ ಮೂರ್ತಿ ಮಾತನಾಡಿ  ಕೇವಲ ಒಂದು ಜಾತಿಗೆ ಸಂವಿಧಾನ ಸೀಮಿತವಾಗಿಲ್ಲ ಎಲ್ಲರಿಗೂ ಸಮಾನತೆ ಹಾಗೂ ನ್ಯಾಯ ಕಲ್ಪಿಸುವಲ್ಲಿ ಸಂವಿಧಾನ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. 

ಪ್ರಪಂಚದಲ್ಲಿ ಅತ್ಯುತ್ತಮ ಸಂವಿಧಾನ ಬರೆದು ಕೊಟ್ಟ ವಿಶ್ವ ಮಾನವ ಡಾ ಬಿ ಆರ್ ಅಂಬೇಡ್ಕರ್ ಎಂದರು.

 ಈ ಸಂದರ್ಭದಲ್ಲಿ ಪರಮಾಪೂಜ್ಯ ಶ್ರೀ ಬೋಧಿರತ್ನ ಬಂತೇಜಿ ನಳಂದ ಬುದ್ಧ ವಿಹಾರ ಟಿ ನರಸೀಪುರ, ಗ್ರಾ ಪಂ ಅಧ್ಯಕ್ಷ ಕೆ ಸಿ ನಾಗರಾಜ್, ಗ್ರಾ ಪಂ ಸದಸ್ಯರಾದ ಮಹದೇವಸ್ವಾಮಿ, ಎ ಪ್ರಕಾಶ್, ಸಾಕಮ್ಮ ಚಿನ್ನಸ್ವಾಮಿ, ಶಿಲ್ಪಾ ನಾಗಣ್ಣ,ರಾಜಮ್ಮ, ಮುಖಂಡರಾದ ಕೆ ಎಂ ನಾಗರಾಜ್, ಕೆ ವಿ ದೇವೇಂದ್ರ, ನಂಜಯ್ಯ, ಮಲ್ಲಯ್ಯ, ಎನ್ ರಾಜೇಶ್ ಹಾಗೂ ಹಾಲಿ ಮತ್ತು ನಿವೃತ್ತ ಸರ್ಕಾರಿ ನೌಕರ ಬಳಗ, ಜೈಭೀಮ್ ಮಹಾ ಪುರುಷ ಯುವಕರ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು .

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456